Sunday, July 4, 2010

ಚಿತ್ರಗಳೂ- ವಿಮರ್ಶೆಗಳು - ೧


ಕಳೆದ ಒಂದೆರೆಡು ವರುಷಗಳಿಂದ ನಾನು ನೋಡಿದ ಚಿತ್ರಗಳು ಮತ್ತು ಅದರ ರ‍ೇಟಿಂಗ್ ಹಾಕುತ್ತ ಇದ್ದೀನಿ.

21
ಎಮ್ ಐ ಟಿ ವಿಧ್ಯಾರ್ಥಿಗಳು ಅವರ ಗುರುವಿನ ನೆರವಿನ ಜೊತೆ ಸೇರಿ ಬ್ಲಾಕ್ ಜ್ಯಾಕ್ ಆಟದಲ್ಲಿ ಎಲೆ ಎಣಿಸುವಿಕೆಯನ್ನು
ಪರಿಣಿತ ಮಾಡಿಕೊಂಡು, ಅನೇಕ ಕ್ಯಾಸಿನೋಗಳಿಗೆ ಕಂಟಕರಾಗಿರುತ್ತಾರೆ. ಇವರ ಮೇಲೆ ಹದ್ದಿನ ಕಣ್ಣು ಇಟ್ಟ ಒಬ್ಬ ಎಜೆಂಟ್
ಇವರನ್ನು ಬಯಲು ಮಾಡುತ್ತಾನೆ. ಚಿತ್ರ ಚೆನ್ನಾಗಿದೆ, ನೋಡಿಸಿಕೊಂಡು ಹೋಗುತ್ತದೆ, ಕಥೆ ವಿಭಿನ್ನವಾಗಿದೆ.

ರೇಟಿಂಗ್ - ೬/೧೦





Barry Lyndon
ಒಬ್ಬ ಅವಕಾಶವಾದಿಯ ಜೀವನಗಾಧೆಯೇ ಈ ಚಿತ್ರ,೧೮ ನೇ ಶತಮಾನದಲ್ಲಿ ನಡೆಯುವ ಕಥೆಯಲ್ಲಿ ಬರುವ ಈ ಪಾತ್ರ ಹೇಗೆ ಅನೇಕ ಸನ್ನೀವೇಶಗಳನ್ನು ಬಳಸಿಕೊಂಡು ಮೇಲೆ ಬರುತ್ತದೆ ಅನ್ನುವದರ ಮೇಲೆ ಚಿತ್ರ ನಿರ್ಮಾಣವಾಗಿದೆ

ರೇಟಿಂಗ್ - ೭.೫/೧೦





Big Fish
ಅಪ್ಪ ಮಗನಿಗೆ ಚಿಕ್ಕ ವಯಸ್ಸಿನಿಂದ ಅನೇಕ ಕಥೆಗಳನ್ನು ಹೇಳುತ್ತ ಇರುತ್ತಾನೆ, ಆ ಕಥೆಗಳು ಕೇವಲ ಕಥೆ ಆಗಿರದೆ
ಮಗನಿಗೆ ಇನ್ನೊಂದು ಲೋಕಕ್ಕೆ ಕೊಂಡೋಯ್ಯುತ್ತದೆ. ಒಂದೊಂದು ಉಪಕಥೆಗಳು ಚೆನ್ನಾಗಿದೆ, ಒಳ್ಲೆ ಪ್ರಯತ್ನ







Bound
೧೯೯೬ ರ ಚಿತ್ರ, ಇಬ್ಬರು ಹೆಂಗಸರು ಪ್ರೇಮಿಗಳಾಗಿ ಕೋಟ್ಯಾಂತರ ಹಣವನ್ನು ಲೂಟಿ ಮಾಡುವ ಪ್ರಯತ್ನ ಮಾಡುತ್ತಾರೆ.

ರೇಟಿಂಗ್ - ೭.೫/೧೦






Brokeback Mountain

ಇದೊಂದು ವಿಭಿನ್ನ ಕಥೆ ಇರುವ ಚಿತ್ರ, ಗೇ ಸಂಭಂದವನ್ನು ಇದರಲ್ಲಿ ಚಿತ್ರಿಸಿದ್ದಾರೆ.

ರೇಟಿಂಗ್ - ೬/೧೦

Saturday, July 11, 2009

ವಾಲಿ- ಟರ್ಕಿಷ್ ಚಿತ್ರ



VALI ಇದು ಟರ್ಕಿಷ್ ಚಿತ್ರ, ಈ ಚಲನಚಿತ್ರ ಡೇನ್ಜಿಲ್ ರಾಜ್ಯದ ರಾಜ್ಯಪಾಲರಾಗಿದ್ದ Yazıcıoğlu ಎಂಬುವರ ನೈಜ ಘಟನೆಯನ್ನು ಆಧಾರಿತ ಚಿತ್ರ. ಕಥೆ ಹಂದರ , ಪಾತ್ರ ಪೋಷಣೆ ಬಹಳ ಚೆನ್ನಾಗಿದೆ. ವಾಲಿ ಎಂದರೆ ಟರ್ಕಿಷ್ ಭಾಷೆಯಲ್ಲಿ ರಾಜ್ಯಪಾಲ ಎಂದರ್ಥ. ಅವನ ಕಾರ್ಯದಕ್ಷತೆ, ಜನಗಳಲ್ಲಿ ಇಟ್ಟ ಪ್ರೀತಿ, ಅವನ ಕುಟುಂಬದ ಬಗ್ಗೆ ಈ ಚಿತ್ರದಲ್ಲಿ ಹಾಸುಹೋಗುತ್ತದೆ.

ಇಲ್ಲಿ ಒಂದು ಮಾಫಿಯಾ ಇದೆ, ಇದು ಯುರೇನಿಯಂ ನಿಕ್ಷೇಪವನ್ನು ಪಡೆಯಲು ಹರಸಾಹಸ ಮಾಡುತ್ತ ಇರುತ್ತದೆ, ಇದಕ್ಕೆ ಅನುಸರಿಸದ ತಂತ್ರವಿಲ್ಲ. ಇದಕ್ಕೆ ರಾಜಕೀಯ ಬೆಂಬಲ ಬೇರೆ, ಆದರೆ ಇದನ್ನು ಶತಾಯಗತಾಯ ಇವರ ಕೈಗೆ ಹೋಗುವದನ್ನು ತಪ್ಪಿಸಲು ರಾಜ್ಯಪಾಲ ಮತ್ತು ಅವನ ಅಣ್ಣ-ತಮ್ಮ ಹರಸಾಹಸ ಮಾಡುತ್ತಾರೆ, ಆದರೆ ಪ್ರಚಂಡ ಮಾಫಿಯಾ ಕೈಗೆ ಸಿಕ್ಕು ಎಲ್ಲಾ ಕೊಲೆಯಾಗುತ್ತ್ತಾರೆ ೨೦೦೩ ಇಸವಿಯಲ್ಲಿ.


ಹಣವಂತ ಮಾಫಿಯಾದ ಕೈ ಎಲ್ಲಿ ಎಲ್ಲೆಲ್ಲೀ ಇರುತ್ತದೆ, ಯಾವ ವಾಮಮಾರ್ಗ ಅನುಸರಿಸುತ್ತದೆ ಅಂತ ಈ ಚಿತ್ರದಲ್ಲಿ ಧೈರ್ಯವಾಗಿ ತೋರಿಸಿದ್ದಾರೆ.

ತಪ್ಪದೇ ಒಮ್ಮೆ ನೋಡಿ ಈ ಚಿತ್ರವನ್ನು ...



ನನ್ನ ರೇಟಿಂಗ್ ****

Saturday, April 18, 2009

A VERY SPECIAL LOVE-Review


A VERY SPECIAL LOVE ಅನ್ನೊದು ಫಿಲಿಫೈನ್ಸ ಚಲನಚಿತ್ರ.

ಒಮ್ಮೆ ಚಲನಚಿತ್ರಗಳ ಬಗ್ಗೆ ಮಾತನಾಡುತ್ತ ಇದ್ದಾಗ ನಾನು ನನ್ನ ನನ್ನ ಚ್ಯಾಟ್ ಗೆಳತಿ ಕಾಯೆನ ಕೇಳಿದೆ, ನಿಮ್ಮ ಫಿಲಿಫೈನ್ಸನಲ್ಲಿ
ಸೂಪರ್ ಹಿಟ್ ಚಿತ್ರ ಯಾವುದು ಅಂತ, ಆಗ ಅವಳು ನನಗೆ ಶಿಫಾರಸ್ಸು ಮಾಡಿದ್ದು ಈ ಚಿತ್ರವನ್ನು . ನಾನು ನಮ್ಮ ಮುಂಗಾರುಮಳೆ ಚಿತ್ರ ಅವಳಿಗೆ ತೋರಿಸಿದೆ ಬಿಡಿ ಅದು ಬೇರೆ ಮಾತು.


Laida Magtalas ಅನ್ನೊ ಹುಡುಗಿ ತುಂಬು ಕುಟುಂಬದಲ್ಲಿ ಇರುತ್ತಾಳೆ, ಮನೆ ಸದಾ ನಂದನವನ. ಅವಳಿಗೆ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರಖ್ಯಾತ ಯುವ ಉದ್ಯಮಿ Miggy Montenegro ಅನ್ನೊ ಯುವಕನ ಮೇಲೆ ಕ್ರಷ್ ಆಗುತ್ತದೆ. ಸದಾ ಅವನದೇ ಧ್ಯಾನ, ಕೊನೆಗೆ ಅವನ ಸಂಸ್ಥೆಯಲ್ಲಿ ಸಂದರ್ಶನಕ್ಕೆ ಬಂದಿರುತ್ತದೆ.

Miggy Montenegro ಕುಟುಂಬ ಆ ದೇಶದ ಅಂಬಾನಿ ತರ, ಅನೇಕ ಉದ್ಯಮಗಳು ಕುಟುಂಬದ ಒಡೆತನದಲ್ಲಿ ಇರುತ್ತದೆ, ಇವನು BACHELOR ಅನ್ನೊ ಮ್ಯಾಗಜೀನ್ ಹೊರತರುತ್ತ ಇರುತ್ತಾನೆ. ಆದರೆ ಅದರ ಪ್ರಸಾರ ಸಂಖ್ಯೆ ಕಮ್ಮಿ ಆದಾಗ
ಇವನಿಗೆ ಕೋಪ ಬಂದು ಎಲ್ಲರ ಮೇಲೆ ಕೂಗಾಡುತ್ತಾನೆ , ಕೆಲ್ಸಗಾರರನ್ನು ಬಯ್ಯುತ್ತಾನೆ. ಇದರಿಂದ ಮನನೊಂದ ಸಂಪಾದಕ ಮತ್ತು ಅವನ ಅಭಿಮಾನಿ ಬಳಗ ಕೆಲ್ಸ ಬಿಟ್ಟು ಹೋಗುತ್ತಾರೆ. ಉಳಿದವರು ಭಯದಿಂದ ನಮಗೆ ಎನು ಕಾದಿದೆಯೋ ಅಂತ ಇರುವಾಗ Ladia ಸಂದರ್ಶನಕ್ಕೆ ಬರುತ್ತಾಳೆ, ಕೂಡಲೆ ಅವಳನ್ನು ತನ್ನ ಆಪ್ತ ಸಹಾಯಿಕಿ ಆಗಿ ನೇಮಿಸಿಕೊಳ್ಳುತ್ತಾನೆ. ಇದರಿಂದ ಪುಳಕಿತಳಾದ ಅವಳಿಗೆ ಸ್ವರ್ಗವೇ ಕೈಗೆ ಸಿಕ್ಕ ಹಾಗೆ ಆಗುತ್ತದೆ.

ಪ್ರಸಾರ ಸಂಖ್ಯೆಯಲ್ಲಿ ಹೆಚ್ಚಳ ಇಲ್ಲ , ನಂಬರ್ ೧ ಇಲ್ಲ ಎಂಬ ಕಾರಣಕ್ಕೆ ಬೊರ್ಡ ಚೆನ್ನಾಗಿ Miggy ನ ತರಾಟೆಗೆ ತೆಗೆದುಕೊಳ್ಳುತ್ತದೆ. ಕೊನೆಯ ಒಂದು ಅವಕಾಶ ಕೊಟ್ಟು,ಅದರಲ್ಲಿ ಸೋತರೆ ಮುಚ್ಚುತ್ತೆವೆ ಅಂತ ಧಮಕಿ ಹಾಕುತ್ತಾರೆ.

೩ ವಾರದಲ್ಲಿ ೧೦ ಜನರಲ್ಲಿ ವಿಶೇಷಾಂಕ ತರುವ ಜವಬ್ದಾರಿ ಬೀಳುತ್ತದೆ, ಕಚೇರಿಯಲ್ಲಿ ಎಲ್ಲರ ಬೆಂಡು ತೆಗೆಯುತ್ತಾನೆ, ಮುಂಗೋಪಿ ಬಾಸ ಜೊತೆ ಇವಳು ನಯವಾಗಿ ಕೆಲ್ಸ ಮಾಡುತ್ತ ಅವನ ಮನಸ್ಸನ್ನು ಗೆಲ್ಲುತ್ತಾಳೆ. ಒಮ್ಮೆ ವರದಿಯನ್ನು ಮನೆಗೆ ಕೊಡಲು ಹೋದಾಗ ಅವನಿಗೆ ಜ್ವರ ಬಂದಿರುವದನ್ನು ಕಂಡು ಅಲ್ಲೇ ಇದ್ದು ಶುಶ್ರೂಷೆ ಮಾಡುತ್ತಾಳೆ. ಇದು ಆದ ಮೇಲೆ ಅವಳ ಬಗ್ಗೆ ಅವನಿಗೆ ಇನ್ನಾ ಹೆಚ್ಚು ಗೌರವ ಬರುತ್ತದೆ. ಮತ್ತು ಅವನು ತನ್ನ ಸಹುದ್ಯೋಗಿಗಳ ಜೊತೆ ಚೆನ್ನಾಗಿ ಬೆರೆಯುವದನ್ನು ಕಲಿಯುತ್ತಾನೆ.

ಎಲ್ಲಾ ಮುಗಿದು ಕೊನೆಗೆ ಬೊರ್ಡ ಮುಂದೆ ಪ್ರದರ್ಶನ ಕೊಡಲು ಆಗದೇ ಹತಾಷೆಯಿಂದ್ ಆಚೆ ಬರುತ್ತಾನೆ, ಇದಕ್ಕೆ ಅನುಗುಣವಾಗಿ ಬೊರ್ಡ ಪತ್ರಿಕೆಯನ್ನು ಮುಚ್ಚುವ ನಿರ್ಧಾರ ಮಾಡುತ್ತದೆ. ಇ ವಿಷ್ಯವನ್ನು ತನ್ನ ಸಿಬ್ಬಂದಿಗಳಿಗೆ ತಿಳಿಸಿದಾಗೆ ಎಲ್ಲರಿಗೂ ದಿಗಿಲು ಆಗುತ್ತದೆ.


ಈ ನಿರ್ದಾರವನ್ನು ಪ್ರಶ್ನಿಸಿ ಲೈಡಾ Miggy ನ ಕೇಳುತ್ತಾಳೆ,ಅವನು ನನಗೆ ಯಾರು ಬೇಡ ನೀನು ನನ್ನ ಇಷ್ಟ ಪಟ್ಟೆ ಅಂತ ನಾನು ನಿನ್ನ ಪಡಬೇಕಾ ಅಂತ ಕೇಳಿದಾಗ , ದು:ಖದಿಂದ ಅಲ್ಲಿಂದ ಹೊರಬೀಳುತ್ತಾಳೆ. ಆದರೆ ಅವಳಲ್ಲಿ ಲವಲವಿಕೆ ಮಾಯ ಆಗಿರುತ್ತದೆ, ತಾನು ಪ್ರೇಮಿಸಿ,ಆರಾಧಿಸುತ್ತಿದ್ದವನು ಅಷ್ಟು ಹಗುರವಾಗಿ ಮಾತನಾಡಿದ್ದು ಕೇಳಿ ಅವಳಿಗೆ ಜೀವನ ಬೇಡ ಅನಿಸೊತ್ತೆ.
ಆದರೆ ಅವಳ ಪರಿವಾರ ಅವಳಿಗೆ ಧೈರ್ಯ ತುಂಬೊತ್ತೆ, ಅವನು ಇಲ್ಲದಿದ್ದರೇನು ನಾವು ಇಲ್ಲವೇ ಅಂದಾಗ ಅವಳಿಗೆ ಮತ್ತೆ ಲವಲವಿಕೆ ಬರುತ್ತದೆ.

ತಾನು ಜೀವನದಲ್ಲಿ ಸೋತೆ ಎಂದು ಅಳುತ್ತಿದ್ದಾಗ ಅವನಿಂದ ದೂರವಾಗಿದ್ದ ಅಪ್ಪ ಬಂದು ಅವನಲ್ಲಿ ಮತ್ತೆ ಧೈರ್ಯ ತುಂಬುತ್ತಾನೆ, ಆಗ ಅವನಿಗೆ ಪ್ರೀತಿ ಬಗ್ಗೆ ಅರಿವು ಮೂಡುತ್ತದೆ, ತನ್ನ ಬಗ್ಗೆ ಕಳಕಳಿ ತೋರಿಸಿದ ಲೈಡ ಬಗ್ಗೆ ಪ್ರೀತಿ ಬರುತ್ತದೆ.
ಅವನು ತನ್ನ ಅಣ್ಣನ ಕೆಳಗೆ ಕೆಲ್ಸಕ್ಕೆ ಸೇರುತ್ತಾನೆ, ಸೇರಿದ ಮೊದಲ ದಿನವೇ ರಜಾ ಹಾಕಿ ತನ್ನ ಪ್ರೇಮ ನಿವೇದನೆಯನ್ನು ಮತ್ತೆ ಲೈಡಾಗೆ ಮಾಡುತ್ತಾನೆ. ಅವಳು ಅವನನ್ನು ಸತಾಯಿಸಿ ಕೊನೆಗೆ ಒಪ್ಪಿಕೊಳ್ಳುತ್ತಾಳೆ ಅಲ್ಲಿಗೆ ಚಿತ್ರ ಮುಕ್ತಾಯ ಆಗುತ್ತದೆ.

ಚಿತ್ರದ ನಿರೂಪಣೆ ಚೆನ್ನಾಗಿದೆ,ನೋಡಿಕೊಂಡು ಹೋಗುತ್ತದೆ. ಮನರಂಜನೆ ಚೆನ್ನಾಗಿದೆ...

Rating :- ***

Das Leben der Anderen- ವಿಮರ್ಶೆ

Das Leben der Anderen ಅಂತ ೨೦೦೬ ರಲ್ಲಿ ತೆರೆಕಂಡ ಚಿತ್ರ ಇದು The Lives of others ಅನ್ನೊ ಹೆಸರಲ್ಲಿ ಆಂಗ್ಲ ಭಾಷೆಯಲ್ಲಿ ತೆರೆಕಂಡಿತ್ತು. ಇದು ಭಾರತಕ್ಕೆ ಬರುವ ವೇಳೆಗೆ ಆಸ್ಕರ್ ಗೆದ್ದು ಒಂದು ವರುಷ ಆಗಿತ್ತು.

ಪೂರ್ವ ಜರ್ಮನಿ ಬಗ್ಗೆ ಅನೇಕ ಚಿತ್ರಗಳು ಬಂದು ಹೋಗಿವೆ, ಆಗಿದ್ದ ಪರಿಸ್ಥಿತಿ ಮತ್ತು ಅಲ್ಲಿನ ಜೀವನ ಮತ್ತು ಪಶ್ಚಿಮ ಜರ್ಮನಿ ಜೊತೆ ಇದ್ದ ಅಜಗಜಾಂತರ ವ್ಯತ್ಯಾಸ ಎಲ್ಲಾ ಚಲನಚಿತ್ರಗಳ ಮುಖ್ಯ ಅಂಶವಾಗಿದೆ. ೮೦ ದಶಕದಲ್ಲಿ Georg Dreyman ಅನ್ನೊ ಒಬ್ಬ ಪ್ರಸಿದ್ದ ನಾಟಕಕಾರ ಮತ್ತು ಅವನ ಪ್ರೇಯಸಿ ಮತ್ತು ನಟಿ Christa-Maria Sieland
ಅವರ ಪ್ರೇಮ ಕಥೆಯಲ್ಲಿ ವಿಲನ್ ಆಗಿ ಮಂತ್ರಿ ಬರುತ್ತಾನೆ. Georg Dreyman ಇತರ ಗೆಳೆಯರ ಜೊತೆ ಕೂಡಿ ಪೂರ್ವ ಜರ್ಮನಿಯ ಆಡಳಿತದ ಬಗ್ಗೆ ಟೀಕೆ ಮಾಡಿ ಲೇಖನಗಳನ್ನು ಪ್ರಕಟಿಸುತ್ತ ಇರುತ್ತಾರೆ. ಆ ನಿಟ್ಟಿನಲ್ಲಿ ಸರಕಾರ ಪ್ರತಿಯೊಬ್ಬ ಮನೆಯನ್ನು ಬಗ್ ಮಾಡಿರುತ್ತಾರೆ. ಯಾವ ಮಟ್ಟಿಗೆ ಅಂದರೆ ಗೊರಕೆ ಹೊಡೆಯುವ ಸದ್ದಿಂದ ಹಿಡಿದು ಸೂಜಿ ಬಿದ್ದರು ಆಗುವ ಶಭ್ದಗಳನ್ನು ಮುದ್ರಿಸುವ ವ್ಯವಸ್ಥೆಯನ್ನು ಸರಕಾರ ಹೊಂದಿರುತ್ತದೆ. ಇಂತಹ ಜೀವನದಲ್ಲಿ ಸರಕಾರದ ವಿರುದ್ಧ ಹೋಗುವದೆಂದರೆ ಮೃತ್ಯುವನ್ನು ಅಹ್ವಾನಿಸದ ಹಾಗೆ ಇದ್ದರು, ಜನ ತಮ್ಮದೇ ವಿಧಾನಗಳನ್ನು ಮಾಡಿಕೊಂಡಿರುತ್ತಾರೆ.
ಒಬ್ಬರ ಮನೆಗೆ ಒಬ್ಬರು ಹೋದರೆ ಜೋರಾಗಿ ಹಾಡನ್ನು ಹಾಕಿ, ಒಂದು ಪೇಪರಿನಲ್ಲಿ ಬರೆದುಕೊಂಡು ಇಲ್ಲಾ ಕಿವಿಗೆ ಪಿಸುಗುಟ್ಟು ಮಾತನಾಡುತ್ತ ಇರುತ್ತಾರೆ.

ಅಲ್ಲಿನ ಸಂಸ್ಕೃತಿ ಮಂತ್ರಿಗೆ christia ಮೇಲೆ ಪ್ರೇಮ ಉಂಟಾಗುತ್ತದೆ, ಅವಳನ್ನು ಹೇಗಾದರೂ ಪಡೆಯಬೇಕೆಂದು ೨ ಬಾರಿ ಪ್ರೇಮ ನಿವೇದನೆ ಮಾಡುತ್ತಾನೆ, ಅದರೆ ಅದನ್ನು ತಿರಸ್ಕರಿಸಿದ್ದು ಅದಕ್ಕೆ ಮುಳ್ಳಾಗಿ ಅವಳ ಪ್ರೇಮಿ ಇರುವುದು ನುಂಗಲಾರದ ತುತ್ತಾಗಿ ಅವನನ್ನು ಸಿಕ್ಕಿಸಬೇಕೆಂದು ಅವನ ಮೇಲೆ ನಿಗಾ ಇಡಲು ಪೋಲಿಸರಿಗೆ ಹೇಳುತ್ತಾನೆ.
ಅವನ ಮೇಲೆ ನಿಗಾ ಇಡಲು Wiesler ಅನ್ನೊ ದಕ್ಷ ಅಧಿಕಾರಿ ನೇಮಕಗೊಂಡು, Georg ಮನೆಯ ಎದುರು ಮನೆ ಮಾಡಿ ಇವರ ಚಲನವಲನ ಮನೆಯಲ್ಲಿ ಆದ ಸಪ್ಪಳ ಮಾತುಕಥೆಗಳನ್ನು ಚಾಚೂ ತಪ್ಪದೇ ದಿನಾ ಬರೆದು ಅದನ್ನು ಮಂತ್ರಿಗೆ ಕೊಡುತ್ತ ಇರುತ್ತಾರೆ. ಇದರ ಸುಳಿವು ನಯಾ ಪೈಸೆ GEROG ಗೆ ಇರುವದಿಲ್ಲ, ಅವನಿಗೆ ಮತ್ತು ಅವನ ಗೆಳೆಯರಿಗೆ ಮನೆಯೇ ಹೆಚ್ಚು ಸುರಕ್ಷಿತ ಪ್ರದೇಶ ಅನಿಸಿರುತ್ತದೆ.



ಹೀಗೆ ದಿನಗಳು ಕಳೆಯುತ್ತ ಇರುತ್ತದೆ, Wiesler ಗೆ ಮೊದಲಿಂದಲೂ ಇ ಕೆಲಸ ಸರಿ ಅನಿಸುವದಿಲ್ಲ, ತಮ್ಮ ಕಾಮತೃಷೆಗೆ ಈ ಕೆಲಸವನ್ನು ಮಾಡಿಸುತ್ತಿರುವ ಮಂತ್ರಿ ಬಗ್ಗೆ ಅಸಹ್ಯ ಆಗುತ್ತದೆ. ಆ ನಿಟ್ಟಿನಲ್ಲಿ ಪ್ರತಿದಿನ ಕೊಡುವ ವರದಿ ಸಪ್ಪೆ ಇರುತ್ತದೆ, ಇದು ಮಂತ್ರಿಗೆ ಕಿರಿಕಿರಿ ಉಂಟು ಮಾಡಿ ಹೆಚ್ಚಿನ ಒತ್ತಡ ಹಾಕುತ್ತಾರೆ ಅವರನ್ನು ಸಿಕ್ಕಿಸಲು. ಒಮ್ಮೆ christia ಡ್ರಗ್ ತೆಗೆದುಕೊಳ್ಳಲು ಹೋದಾಗ ಅವಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ಆ ಹೊತ್ತಿಗೆ GEORG ಲೇಖನ ಒಂದು ಹಂಗೆರಿಯ ಒಂದು ಪತ್ರಿಕೆಯಲ್ಲಿ ಪ್ರಕಟ ಆಗಿ ಸರ್ಕಾರಕ್ಕೆ ಮುಜುಗರ ಮಾಡಿರುತ್ತದೆ. ಆ ಲೇಖನವನ್ನು ಬರೆದು ಕಳಿಸಿರುವ ಟೈಪರೇಟರ್ ಹುಡುಕಲು ಪೋಲಿಸರು ಮುಂದಾಗುತ್ತಾರೆ. Christina ಗೆ ನೇರವಾಗಿ ಹೇಳಿ ಬಿಡುತ್ತಾರೆ ಸಹಾಯ ಮಾಡು ಇಲ್ಲ ನಿನ್ನ ಜೀವನ ಮುಗಿತು ಅಂತ. ಅವಳು ಟೈಪರೇಟರ್ ಹುದುಗಿಸಿಟ್ಟ ಜಾಗ ಹೇಳುತ್ತಾಳೆ, ಅವಳನ್ನು ಬಿಡುಗಡೆ ಮಾಡುತ್ತಾರೆ.

Georg ಮನೆಗೆ ಪೋಲಿಸರು ದಾಳಿ ಇಟ್ಟು ಅವಳು ಹೇಳಿದ ಜಾಗದಲ್ಲಿ ಹುಡುಕುತ್ತಾರೆ ಆದರೆ ಅಲ್ಲಿ ಎನೂ ಇರುವದಿಲ್ಲ, ಇತ್ತ ಮನೆಯಲ್ಲಿ ಪೋಲಿಸರನ್ನು ನೊಡಿ Christa ಗೆ ಗಿಲ್ಟಿಯಾಗಿ ಮನೆಯಿಂದ್ ಆಚೆ ಓಡಿಹೋಗುತ್ತಾಳೆ ಮತ್ತು ದಾರಿಯಲ್ಲಿ ಬರುತ್ತಿರುವ ಒಂದು ವಾಹನಕ್ಕೆ ಮೈ ಒಡ್ಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಯಾರ ಸಲುವಾಗಿ ಈ ಕೆಲ್ಸಕ್ಕೆ ಕೈ ಹಾಕಿದರೋ ಅವಳೇ ಇಲ್ಲದಿದ್ದಾಗ ಮಂತ್ರಿಗೆ ಬೇಜಾರೆನಿಸಿ ಈ ಆಪರೇಷನ್ ನಿಲ್ಲಿಸೊಕ್ಕೆ ಹೇಳುತ್ತಾನೆ ಮತ್ತು Wiesler ನ ಕೆಲ್ಸಕ್ಕೆ ಮುಳ್ಳು ಹಾಕಿ ಅವನನ್ನು ಒಂದು ತೀರಾ ಸಾಧರಣ ಪೋಸ್ಟ ಆಫಿಸ್ ಕೆಲಸಕ್ಕೆ ಹಾಕುತ್ತಾರೆ.

Georg ಗೆ ಟೈಪರೇಟರ್ ಎಲ್ಲಿ ಹೋಯಿತು ಅನ್ನುವುದೇ ಯಕ್ಷ ಪ್ರಶ್ನೆ ಆಗಿರುತ್ತದೆ. ೧೯೮೯ ಮುಗಿದು ಬರ್ಲಿನ್ ಗೋಡೆ ಮುರಿದು ಎರಡು ಜರ್ಮನಿ ಒಂದಾದ ಮೇಲೆ
ಒಮ್ಮೆ georg ತನ್ನ ಹಳೇ ಪ್ರೇಮಿ ನೆನಪಲ್ಲಿ ಒಂದು ನಾಟಕ ಬರೆದಿರುತ್ತಾನೆ, ಆ ನಾಟಕದ ಕೊನೆ ಅಂಕವನ್ನು ನೊಡಲಾಗದೆ ಆಚೆ ಕಣ್ಣೀರು ತುಂಬಿಕೊಂಡು ಬರುತ್ತಾನೆ, ಅಲ್ಲಿ ಅವನಿಗೆ ಮಂತ್ರಿ ಸಿಗುತ್ತಾನೆ.

ಮಂತ್ರಿ :- ಆ ದೃಶ್ಯ ನೋಡಲಿಕ್ಕೆ ಆಗಲಿಲ್ಲ ಅಲ್ವಾ, ನನಗೂ ಅಷ್ಟೆ.
ಜಾರ್ಜ್:- ಅದು ಸರಿ, ನಿಮಗೆ ಒಂದು ಪ್ರಶ್ನೆ ಕೇಳಬಹುದಾ
ಮಂತ್ರಿ :- ಕೇಳು
ಜಾರ್ಜ್:- ೮೦ ದಶಕದಲ್ಲಿ ಎಲ್ಲರ ಮನೆಯನ್ನು ಬಗ್ ಮಾಡಿದ್ದೀರಿ ನನ್ನ ಮನೆಯನ್ನು ಯಾಕೆ ಬಿಟ್ಟಿದ್ದಿರಿ?
ಮಂತ್ರಿ:- ಅಯ್ಯೊ ಹುಚ್ಚಾ ನಿನ್ನ ಮನೆಯ ಇಂಚು ಇಂಚು ಬಗ್ ಆಗಿತ್ತು, ೨ ವರುಶ ಆಪರೇಷನ್ ನಡಿತು
christia ಸತ್ತ ಮೇಲೆ Operation 'Lazlo' ನಿಲ್ಲಿಸಿದ್ವಿ.

ಇದು Georg ಗೆ ನುಂಗಲಾರದ ತುತ್ತಗೊತ್ತೆ. ೨ ವರುಷ ನಾವು ಮಾತನಾಡಿದ್ದು ಕೇಳಿಸಿಕೊಂಡರು ಯಾಕೆ ನನ್ನ ಬಂದಿಸಿರಲಿಲ್ಲ, ಆ ಟೈಪರೇಟರ್ ಎನಾಯಿತು ಅಂತ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸರಕಾರಿ ಕಚೇರಿಗೆ ಹೋಗುತ್ತಾನೆ. ಅಲ್ಲಿ ಹಿಂದೆ ಪೂರ್ವ ಜರ್ಮನಿ ಸಮಯದಲ್ಲಿ ನಡೆದ ಎಲ್ಲಾ ಬೆಳವಣಿಗೆಗಳನ್ನು ಸಾರ್ವಜನಿಕ ಮಾಡಿರುತ್ತಾರೆ.ಅವನು ತನ್ನ ಮೇಲೆ ನಡೆದ ಆಪರೇಷನ್ ಸಂಭಂದಿಸಿದ ಕಡತ ಬೇಕೆನ್ನುತ್ತಾನೆ, ನೋಡಿದರೆ ೧೦೦ ಇರುತ್ತದೆ. ಪ್ರತಿ ದಿನದ , ಪ್ರತಿ ಗಂಟೆಯ ವರದಿ ಅದರಲ್ಲಿ ಇರುತ್ತದೆ. ತಾವು ಮಾತನಾಡಿದ ರಹಸ್ಯ ವಿಷಯಗಳನ್ನು ಬೇರೆ ರೀತಿಯಲ್ಲಿ ಬರೆದಿರುವ ಬಗ್ಗೆ ಆಶ್ಚರ್ಯ ಆಗುತ್ತದೆ. ಒಂದು ಪೇಜಿನಲ್ಲಿ ಕೆಂಪು ಇಂಕು ಕಾಣುತ್ತದೆ, ಆಗ ಅವನಿಗೆ ತನ್ನ ಟೈಪರೇಟರ್ ಬಚ್ಚಿಟ್ಟು ತನ್ನನ್ನು ಉಳಿಸಿದವನು ಯಾರು ಅಂತ ತಿಳಿದುಕೊಳ್ಳುವ ಕುತೂಹಲ ಮೂಡುತ್ತದೆ.
ಅವನ ಕೋಡ್ ನಂಬರ್ ಇಂದ Wiesler ನ ವಿಳಾಸ ಪಡೆಯುತ್ತಾನೆ, ಅವನನ್ನು ಬೇಟಿ ಮಾಡೊಣ ಅಂತ ಹೊರಟವನು ಅವನ ಮುಖತ: ನೋಡಿ ಸಂತೋಷ ಪಟ್ಟು ಧನ್ಯವಾದ ತಿಳಿಸುತ್ತಾನೆ.
ಇತ್ತ wiesler ಅಂಚೆ ಕೆಲ್ಸ ಮಾಡುತ್ತ ದಿನ ದೂಡುತ್ತ ಇರುತ್ತಾನೆ, ಅವನಿಗೆ ತಾನು ಮಾಡಿದ ಕೆಲ್ಸದ ಬಗ್ಗೆ ಸ್ವಲ್ಪವೂ ರಿಗ್ರೇಟ್ ಇರುವದಿಲ್ಲ. ಸುಮ್ಮನೆ ಮಾತುಗಳನ್ನು ಕೇಳುವ ಭರದರಲ್ಲಿ ಆ ಪ್ರೇಮಿಗಳ ಜೀವನದಲ್ಲಿ ಪ್ರವೇಶ ಮಾಡಿರುತ್ತಾನೆ, ಅವರ ಬೆಡರೂಮ್ ಮಾತುಗಳು, ಹಾಸಿಗೆಯಲ್ಲಿ georg ಗೆ ಆಗುವ ನಪುಂಸಕತ್ವ, Christa ಳ ಹತಾಷೆ, ಗೆಳೆಯರ ದೇಶದ್ರೋಹಿ ಕೆಲ್ಸಗಳು ಮತ್ತು ಯೋಜನೆಗಳು ಅರಿವಾಗಿ ಎಲ್ಲೊ ಒಂದು ಕಡೆ ಇವರ ಹಿತೈಶಿಯಾಗಿ ಮಾರ್ಪಾಡಾಗಿದ್ದು ಮತ್ತು ಕೊನೆಗೆ ಅವನನ್ನು ರಕ್ಷಿಸಿದ್ದರ ಬಗ್ಗೆ ಹೆಮ್ಮೆ ಇರುತ್ತದೆ.

ಹೀಗೆ ೨ ವರುಷದ ನಂತರ ಒಮ್ಮೆ ದಾರಿಯಲ್ಲಿ ಸಾಗುವಾಗ Georg ಬರೆದ "Sonata for a Good Man" ಹೊಸ ಪುಸ್ತಕ ನೋಡುತ್ತಾನೆ, ಅದನ್ನು ಕೊಂಡು ಅದರ ಹಾಳೆ ತಿರುವುತ್ತ ಇರುವಾಗ ಅವನ ಕಣ್ಣಿಗೆ ಬೀಳುವುದು
"A Novel" "Dedicated to HGW XX-7, in gratitude."

ಹೀಗೆ ಚಿತ್ರ ಕೊನೆಗಾಣುತ್ತದೆ. ಒಟ್ಟಿನಲ್ಲಿ ಆಸ್ಕರ್ ಗೆದ್ದ ಮೊದಲ ಜರ್ಮನ್ ಚಿತ್ರ ಇದು, ತುಂಬಾ ಚೆನ್ನಾಗಿದೆ. ಮನ ಮಿಡಿಯುವ ಪಾತ್ರಗಳು,ಸನ್ನೀವೇಶಗಳು ಮನಮುಟ್ಟುತ್ತವೆ.

ನನ್ನ ರೇಟಿಂಗ್ :- ****

Start Camera Action ....



ಇದೊಂದು ಹೊಸ ಲೇಖನ ಸರಣಿ, ಕಳೆದ ಒಂದು ವರ್ಷದಲ್ಲಿ ಅನೇಕ ಚಲನಚಿತ್ರಗಳನ್ನು ನೊಡಿದ್ದೇನೆ, ಅದರಲ್ಲಿ ಇಂಗ್ಲೀಷ್,ಜರ್ಮನ್,ರುಮೇನಿಯಾನ್,ತಡಲಾಗ್,ಜಪಾನಿ,ಚೈನಿಸ್,ಅಫಗಾನಿಸ್ತಾನಿ,ಚಿಲಿ,ಇರಾನಿ,ಜರ್ಮನ್, ಮೆಕ್ಸಿಕೊ,ಆಸ್ತ್ರೇಲಿಯಾ,ಪೊಲೆಂಡ್,ಫ್ರೆಂಚ್,ಥೈ, ಭಾಷ, ಸಿಂಹಳ ಒಳಗೊಂಡಿವೆ.
ಅವುಗಳನ್ನು ಯಾಕೆ ನೋಡಿದೆ ಮತ್ತು ನನ್ನ ಅನಿಸಿಕೆ ಎನು ಅಂತ ಹಂಚಿಕೊಳ್ಳುತ್ತೆನೆ.
ಮಾನವನ ವಿವಿಧ ಮುಖಗಳ,ಅಲ್ಲಿನ ಸಂಸ್ಕೃತಿಯನ್ನು ಪರಿಚಯ ಮಾಡುವ ಈ ಚಿತ್ರಗಳು ನಿಜಕ್ಕೂ ಒಂದು ಅನುಭವ.

ಈ ಚಿತ್ರಗಳನ್ನು ನಾನು ನೋಡಲು ತುಂಬಾ ಹರಸಾಹಸ ಪಟ್ಟಿದ್ದೇನೆ, ಈ ಚಿತ್ರಗಳು ಇರುವರ ಬಳಿ ಡಿವಿಡೀ ಎರವಲು ಪಡೆದು ನೊಡಿದ್ದು ಉಂಟು, ಹಾಗೆ ಸಹಕರಿಸಿದ, ನನಗೆ ಈ ಪಯಣಕ್ಕೆ ಸಹಾಯ ಮಾಡಿದ ಗೆಳೆಯ ಆಕಾಶನನ್ನು ನೆನೆಯುತ್ತ..