Saturday, July 11, 2009

ವಾಲಿ- ಟರ್ಕಿಷ್ ಚಿತ್ರ



VALI ಇದು ಟರ್ಕಿಷ್ ಚಿತ್ರ, ಈ ಚಲನಚಿತ್ರ ಡೇನ್ಜಿಲ್ ರಾಜ್ಯದ ರಾಜ್ಯಪಾಲರಾಗಿದ್ದ Yazıcıoğlu ಎಂಬುವರ ನೈಜ ಘಟನೆಯನ್ನು ಆಧಾರಿತ ಚಿತ್ರ. ಕಥೆ ಹಂದರ , ಪಾತ್ರ ಪೋಷಣೆ ಬಹಳ ಚೆನ್ನಾಗಿದೆ. ವಾಲಿ ಎಂದರೆ ಟರ್ಕಿಷ್ ಭಾಷೆಯಲ್ಲಿ ರಾಜ್ಯಪಾಲ ಎಂದರ್ಥ. ಅವನ ಕಾರ್ಯದಕ್ಷತೆ, ಜನಗಳಲ್ಲಿ ಇಟ್ಟ ಪ್ರೀತಿ, ಅವನ ಕುಟುಂಬದ ಬಗ್ಗೆ ಈ ಚಿತ್ರದಲ್ಲಿ ಹಾಸುಹೋಗುತ್ತದೆ.

ಇಲ್ಲಿ ಒಂದು ಮಾಫಿಯಾ ಇದೆ, ಇದು ಯುರೇನಿಯಂ ನಿಕ್ಷೇಪವನ್ನು ಪಡೆಯಲು ಹರಸಾಹಸ ಮಾಡುತ್ತ ಇರುತ್ತದೆ, ಇದಕ್ಕೆ ಅನುಸರಿಸದ ತಂತ್ರವಿಲ್ಲ. ಇದಕ್ಕೆ ರಾಜಕೀಯ ಬೆಂಬಲ ಬೇರೆ, ಆದರೆ ಇದನ್ನು ಶತಾಯಗತಾಯ ಇವರ ಕೈಗೆ ಹೋಗುವದನ್ನು ತಪ್ಪಿಸಲು ರಾಜ್ಯಪಾಲ ಮತ್ತು ಅವನ ಅಣ್ಣ-ತಮ್ಮ ಹರಸಾಹಸ ಮಾಡುತ್ತಾರೆ, ಆದರೆ ಪ್ರಚಂಡ ಮಾಫಿಯಾ ಕೈಗೆ ಸಿಕ್ಕು ಎಲ್ಲಾ ಕೊಲೆಯಾಗುತ್ತ್ತಾರೆ ೨೦೦೩ ಇಸವಿಯಲ್ಲಿ.


ಹಣವಂತ ಮಾಫಿಯಾದ ಕೈ ಎಲ್ಲಿ ಎಲ್ಲೆಲ್ಲೀ ಇರುತ್ತದೆ, ಯಾವ ವಾಮಮಾರ್ಗ ಅನುಸರಿಸುತ್ತದೆ ಅಂತ ಈ ಚಿತ್ರದಲ್ಲಿ ಧೈರ್ಯವಾಗಿ ತೋರಿಸಿದ್ದಾರೆ.

ತಪ್ಪದೇ ಒಮ್ಮೆ ನೋಡಿ ಈ ಚಿತ್ರವನ್ನು ...



ನನ್ನ ರೇಟಿಂಗ್ ****