Saturday, April 18, 2009

Das Leben der Anderen- ವಿಮರ್ಶೆ

Das Leben der Anderen ಅಂತ ೨೦೦೬ ರಲ್ಲಿ ತೆರೆಕಂಡ ಚಿತ್ರ ಇದು The Lives of others ಅನ್ನೊ ಹೆಸರಲ್ಲಿ ಆಂಗ್ಲ ಭಾಷೆಯಲ್ಲಿ ತೆರೆಕಂಡಿತ್ತು. ಇದು ಭಾರತಕ್ಕೆ ಬರುವ ವೇಳೆಗೆ ಆಸ್ಕರ್ ಗೆದ್ದು ಒಂದು ವರುಷ ಆಗಿತ್ತು.

ಪೂರ್ವ ಜರ್ಮನಿ ಬಗ್ಗೆ ಅನೇಕ ಚಿತ್ರಗಳು ಬಂದು ಹೋಗಿವೆ, ಆಗಿದ್ದ ಪರಿಸ್ಥಿತಿ ಮತ್ತು ಅಲ್ಲಿನ ಜೀವನ ಮತ್ತು ಪಶ್ಚಿಮ ಜರ್ಮನಿ ಜೊತೆ ಇದ್ದ ಅಜಗಜಾಂತರ ವ್ಯತ್ಯಾಸ ಎಲ್ಲಾ ಚಲನಚಿತ್ರಗಳ ಮುಖ್ಯ ಅಂಶವಾಗಿದೆ. ೮೦ ದಶಕದಲ್ಲಿ Georg Dreyman ಅನ್ನೊ ಒಬ್ಬ ಪ್ರಸಿದ್ದ ನಾಟಕಕಾರ ಮತ್ತು ಅವನ ಪ್ರೇಯಸಿ ಮತ್ತು ನಟಿ Christa-Maria Sieland
ಅವರ ಪ್ರೇಮ ಕಥೆಯಲ್ಲಿ ವಿಲನ್ ಆಗಿ ಮಂತ್ರಿ ಬರುತ್ತಾನೆ. Georg Dreyman ಇತರ ಗೆಳೆಯರ ಜೊತೆ ಕೂಡಿ ಪೂರ್ವ ಜರ್ಮನಿಯ ಆಡಳಿತದ ಬಗ್ಗೆ ಟೀಕೆ ಮಾಡಿ ಲೇಖನಗಳನ್ನು ಪ್ರಕಟಿಸುತ್ತ ಇರುತ್ತಾರೆ. ಆ ನಿಟ್ಟಿನಲ್ಲಿ ಸರಕಾರ ಪ್ರತಿಯೊಬ್ಬ ಮನೆಯನ್ನು ಬಗ್ ಮಾಡಿರುತ್ತಾರೆ. ಯಾವ ಮಟ್ಟಿಗೆ ಅಂದರೆ ಗೊರಕೆ ಹೊಡೆಯುವ ಸದ್ದಿಂದ ಹಿಡಿದು ಸೂಜಿ ಬಿದ್ದರು ಆಗುವ ಶಭ್ದಗಳನ್ನು ಮುದ್ರಿಸುವ ವ್ಯವಸ್ಥೆಯನ್ನು ಸರಕಾರ ಹೊಂದಿರುತ್ತದೆ. ಇಂತಹ ಜೀವನದಲ್ಲಿ ಸರಕಾರದ ವಿರುದ್ಧ ಹೋಗುವದೆಂದರೆ ಮೃತ್ಯುವನ್ನು ಅಹ್ವಾನಿಸದ ಹಾಗೆ ಇದ್ದರು, ಜನ ತಮ್ಮದೇ ವಿಧಾನಗಳನ್ನು ಮಾಡಿಕೊಂಡಿರುತ್ತಾರೆ.
ಒಬ್ಬರ ಮನೆಗೆ ಒಬ್ಬರು ಹೋದರೆ ಜೋರಾಗಿ ಹಾಡನ್ನು ಹಾಕಿ, ಒಂದು ಪೇಪರಿನಲ್ಲಿ ಬರೆದುಕೊಂಡು ಇಲ್ಲಾ ಕಿವಿಗೆ ಪಿಸುಗುಟ್ಟು ಮಾತನಾಡುತ್ತ ಇರುತ್ತಾರೆ.

ಅಲ್ಲಿನ ಸಂಸ್ಕೃತಿ ಮಂತ್ರಿಗೆ christia ಮೇಲೆ ಪ್ರೇಮ ಉಂಟಾಗುತ್ತದೆ, ಅವಳನ್ನು ಹೇಗಾದರೂ ಪಡೆಯಬೇಕೆಂದು ೨ ಬಾರಿ ಪ್ರೇಮ ನಿವೇದನೆ ಮಾಡುತ್ತಾನೆ, ಅದರೆ ಅದನ್ನು ತಿರಸ್ಕರಿಸಿದ್ದು ಅದಕ್ಕೆ ಮುಳ್ಳಾಗಿ ಅವಳ ಪ್ರೇಮಿ ಇರುವುದು ನುಂಗಲಾರದ ತುತ್ತಾಗಿ ಅವನನ್ನು ಸಿಕ್ಕಿಸಬೇಕೆಂದು ಅವನ ಮೇಲೆ ನಿಗಾ ಇಡಲು ಪೋಲಿಸರಿಗೆ ಹೇಳುತ್ತಾನೆ.
ಅವನ ಮೇಲೆ ನಿಗಾ ಇಡಲು Wiesler ಅನ್ನೊ ದಕ್ಷ ಅಧಿಕಾರಿ ನೇಮಕಗೊಂಡು, Georg ಮನೆಯ ಎದುರು ಮನೆ ಮಾಡಿ ಇವರ ಚಲನವಲನ ಮನೆಯಲ್ಲಿ ಆದ ಸಪ್ಪಳ ಮಾತುಕಥೆಗಳನ್ನು ಚಾಚೂ ತಪ್ಪದೇ ದಿನಾ ಬರೆದು ಅದನ್ನು ಮಂತ್ರಿಗೆ ಕೊಡುತ್ತ ಇರುತ್ತಾರೆ. ಇದರ ಸುಳಿವು ನಯಾ ಪೈಸೆ GEROG ಗೆ ಇರುವದಿಲ್ಲ, ಅವನಿಗೆ ಮತ್ತು ಅವನ ಗೆಳೆಯರಿಗೆ ಮನೆಯೇ ಹೆಚ್ಚು ಸುರಕ್ಷಿತ ಪ್ರದೇಶ ಅನಿಸಿರುತ್ತದೆ.



ಹೀಗೆ ದಿನಗಳು ಕಳೆಯುತ್ತ ಇರುತ್ತದೆ, Wiesler ಗೆ ಮೊದಲಿಂದಲೂ ಇ ಕೆಲಸ ಸರಿ ಅನಿಸುವದಿಲ್ಲ, ತಮ್ಮ ಕಾಮತೃಷೆಗೆ ಈ ಕೆಲಸವನ್ನು ಮಾಡಿಸುತ್ತಿರುವ ಮಂತ್ರಿ ಬಗ್ಗೆ ಅಸಹ್ಯ ಆಗುತ್ತದೆ. ಆ ನಿಟ್ಟಿನಲ್ಲಿ ಪ್ರತಿದಿನ ಕೊಡುವ ವರದಿ ಸಪ್ಪೆ ಇರುತ್ತದೆ, ಇದು ಮಂತ್ರಿಗೆ ಕಿರಿಕಿರಿ ಉಂಟು ಮಾಡಿ ಹೆಚ್ಚಿನ ಒತ್ತಡ ಹಾಕುತ್ತಾರೆ ಅವರನ್ನು ಸಿಕ್ಕಿಸಲು. ಒಮ್ಮೆ christia ಡ್ರಗ್ ತೆಗೆದುಕೊಳ್ಳಲು ಹೋದಾಗ ಅವಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ಆ ಹೊತ್ತಿಗೆ GEORG ಲೇಖನ ಒಂದು ಹಂಗೆರಿಯ ಒಂದು ಪತ್ರಿಕೆಯಲ್ಲಿ ಪ್ರಕಟ ಆಗಿ ಸರ್ಕಾರಕ್ಕೆ ಮುಜುಗರ ಮಾಡಿರುತ್ತದೆ. ಆ ಲೇಖನವನ್ನು ಬರೆದು ಕಳಿಸಿರುವ ಟೈಪರೇಟರ್ ಹುಡುಕಲು ಪೋಲಿಸರು ಮುಂದಾಗುತ್ತಾರೆ. Christina ಗೆ ನೇರವಾಗಿ ಹೇಳಿ ಬಿಡುತ್ತಾರೆ ಸಹಾಯ ಮಾಡು ಇಲ್ಲ ನಿನ್ನ ಜೀವನ ಮುಗಿತು ಅಂತ. ಅವಳು ಟೈಪರೇಟರ್ ಹುದುಗಿಸಿಟ್ಟ ಜಾಗ ಹೇಳುತ್ತಾಳೆ, ಅವಳನ್ನು ಬಿಡುಗಡೆ ಮಾಡುತ್ತಾರೆ.

Georg ಮನೆಗೆ ಪೋಲಿಸರು ದಾಳಿ ಇಟ್ಟು ಅವಳು ಹೇಳಿದ ಜಾಗದಲ್ಲಿ ಹುಡುಕುತ್ತಾರೆ ಆದರೆ ಅಲ್ಲಿ ಎನೂ ಇರುವದಿಲ್ಲ, ಇತ್ತ ಮನೆಯಲ್ಲಿ ಪೋಲಿಸರನ್ನು ನೊಡಿ Christa ಗೆ ಗಿಲ್ಟಿಯಾಗಿ ಮನೆಯಿಂದ್ ಆಚೆ ಓಡಿಹೋಗುತ್ತಾಳೆ ಮತ್ತು ದಾರಿಯಲ್ಲಿ ಬರುತ್ತಿರುವ ಒಂದು ವಾಹನಕ್ಕೆ ಮೈ ಒಡ್ಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಯಾರ ಸಲುವಾಗಿ ಈ ಕೆಲ್ಸಕ್ಕೆ ಕೈ ಹಾಕಿದರೋ ಅವಳೇ ಇಲ್ಲದಿದ್ದಾಗ ಮಂತ್ರಿಗೆ ಬೇಜಾರೆನಿಸಿ ಈ ಆಪರೇಷನ್ ನಿಲ್ಲಿಸೊಕ್ಕೆ ಹೇಳುತ್ತಾನೆ ಮತ್ತು Wiesler ನ ಕೆಲ್ಸಕ್ಕೆ ಮುಳ್ಳು ಹಾಕಿ ಅವನನ್ನು ಒಂದು ತೀರಾ ಸಾಧರಣ ಪೋಸ್ಟ ಆಫಿಸ್ ಕೆಲಸಕ್ಕೆ ಹಾಕುತ್ತಾರೆ.

Georg ಗೆ ಟೈಪರೇಟರ್ ಎಲ್ಲಿ ಹೋಯಿತು ಅನ್ನುವುದೇ ಯಕ್ಷ ಪ್ರಶ್ನೆ ಆಗಿರುತ್ತದೆ. ೧೯೮೯ ಮುಗಿದು ಬರ್ಲಿನ್ ಗೋಡೆ ಮುರಿದು ಎರಡು ಜರ್ಮನಿ ಒಂದಾದ ಮೇಲೆ
ಒಮ್ಮೆ georg ತನ್ನ ಹಳೇ ಪ್ರೇಮಿ ನೆನಪಲ್ಲಿ ಒಂದು ನಾಟಕ ಬರೆದಿರುತ್ತಾನೆ, ಆ ನಾಟಕದ ಕೊನೆ ಅಂಕವನ್ನು ನೊಡಲಾಗದೆ ಆಚೆ ಕಣ್ಣೀರು ತುಂಬಿಕೊಂಡು ಬರುತ್ತಾನೆ, ಅಲ್ಲಿ ಅವನಿಗೆ ಮಂತ್ರಿ ಸಿಗುತ್ತಾನೆ.

ಮಂತ್ರಿ :- ಆ ದೃಶ್ಯ ನೋಡಲಿಕ್ಕೆ ಆಗಲಿಲ್ಲ ಅಲ್ವಾ, ನನಗೂ ಅಷ್ಟೆ.
ಜಾರ್ಜ್:- ಅದು ಸರಿ, ನಿಮಗೆ ಒಂದು ಪ್ರಶ್ನೆ ಕೇಳಬಹುದಾ
ಮಂತ್ರಿ :- ಕೇಳು
ಜಾರ್ಜ್:- ೮೦ ದಶಕದಲ್ಲಿ ಎಲ್ಲರ ಮನೆಯನ್ನು ಬಗ್ ಮಾಡಿದ್ದೀರಿ ನನ್ನ ಮನೆಯನ್ನು ಯಾಕೆ ಬಿಟ್ಟಿದ್ದಿರಿ?
ಮಂತ್ರಿ:- ಅಯ್ಯೊ ಹುಚ್ಚಾ ನಿನ್ನ ಮನೆಯ ಇಂಚು ಇಂಚು ಬಗ್ ಆಗಿತ್ತು, ೨ ವರುಶ ಆಪರೇಷನ್ ನಡಿತು
christia ಸತ್ತ ಮೇಲೆ Operation 'Lazlo' ನಿಲ್ಲಿಸಿದ್ವಿ.

ಇದು Georg ಗೆ ನುಂಗಲಾರದ ತುತ್ತಗೊತ್ತೆ. ೨ ವರುಷ ನಾವು ಮಾತನಾಡಿದ್ದು ಕೇಳಿಸಿಕೊಂಡರು ಯಾಕೆ ನನ್ನ ಬಂದಿಸಿರಲಿಲ್ಲ, ಆ ಟೈಪರೇಟರ್ ಎನಾಯಿತು ಅಂತ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸರಕಾರಿ ಕಚೇರಿಗೆ ಹೋಗುತ್ತಾನೆ. ಅಲ್ಲಿ ಹಿಂದೆ ಪೂರ್ವ ಜರ್ಮನಿ ಸಮಯದಲ್ಲಿ ನಡೆದ ಎಲ್ಲಾ ಬೆಳವಣಿಗೆಗಳನ್ನು ಸಾರ್ವಜನಿಕ ಮಾಡಿರುತ್ತಾರೆ.ಅವನು ತನ್ನ ಮೇಲೆ ನಡೆದ ಆಪರೇಷನ್ ಸಂಭಂದಿಸಿದ ಕಡತ ಬೇಕೆನ್ನುತ್ತಾನೆ, ನೋಡಿದರೆ ೧೦೦ ಇರುತ್ತದೆ. ಪ್ರತಿ ದಿನದ , ಪ್ರತಿ ಗಂಟೆಯ ವರದಿ ಅದರಲ್ಲಿ ಇರುತ್ತದೆ. ತಾವು ಮಾತನಾಡಿದ ರಹಸ್ಯ ವಿಷಯಗಳನ್ನು ಬೇರೆ ರೀತಿಯಲ್ಲಿ ಬರೆದಿರುವ ಬಗ್ಗೆ ಆಶ್ಚರ್ಯ ಆಗುತ್ತದೆ. ಒಂದು ಪೇಜಿನಲ್ಲಿ ಕೆಂಪು ಇಂಕು ಕಾಣುತ್ತದೆ, ಆಗ ಅವನಿಗೆ ತನ್ನ ಟೈಪರೇಟರ್ ಬಚ್ಚಿಟ್ಟು ತನ್ನನ್ನು ಉಳಿಸಿದವನು ಯಾರು ಅಂತ ತಿಳಿದುಕೊಳ್ಳುವ ಕುತೂಹಲ ಮೂಡುತ್ತದೆ.
ಅವನ ಕೋಡ್ ನಂಬರ್ ಇಂದ Wiesler ನ ವಿಳಾಸ ಪಡೆಯುತ್ತಾನೆ, ಅವನನ್ನು ಬೇಟಿ ಮಾಡೊಣ ಅಂತ ಹೊರಟವನು ಅವನ ಮುಖತ: ನೋಡಿ ಸಂತೋಷ ಪಟ್ಟು ಧನ್ಯವಾದ ತಿಳಿಸುತ್ತಾನೆ.
ಇತ್ತ wiesler ಅಂಚೆ ಕೆಲ್ಸ ಮಾಡುತ್ತ ದಿನ ದೂಡುತ್ತ ಇರುತ್ತಾನೆ, ಅವನಿಗೆ ತಾನು ಮಾಡಿದ ಕೆಲ್ಸದ ಬಗ್ಗೆ ಸ್ವಲ್ಪವೂ ರಿಗ್ರೇಟ್ ಇರುವದಿಲ್ಲ. ಸುಮ್ಮನೆ ಮಾತುಗಳನ್ನು ಕೇಳುವ ಭರದರಲ್ಲಿ ಆ ಪ್ರೇಮಿಗಳ ಜೀವನದಲ್ಲಿ ಪ್ರವೇಶ ಮಾಡಿರುತ್ತಾನೆ, ಅವರ ಬೆಡರೂಮ್ ಮಾತುಗಳು, ಹಾಸಿಗೆಯಲ್ಲಿ georg ಗೆ ಆಗುವ ನಪುಂಸಕತ್ವ, Christa ಳ ಹತಾಷೆ, ಗೆಳೆಯರ ದೇಶದ್ರೋಹಿ ಕೆಲ್ಸಗಳು ಮತ್ತು ಯೋಜನೆಗಳು ಅರಿವಾಗಿ ಎಲ್ಲೊ ಒಂದು ಕಡೆ ಇವರ ಹಿತೈಶಿಯಾಗಿ ಮಾರ್ಪಾಡಾಗಿದ್ದು ಮತ್ತು ಕೊನೆಗೆ ಅವನನ್ನು ರಕ್ಷಿಸಿದ್ದರ ಬಗ್ಗೆ ಹೆಮ್ಮೆ ಇರುತ್ತದೆ.

ಹೀಗೆ ೨ ವರುಷದ ನಂತರ ಒಮ್ಮೆ ದಾರಿಯಲ್ಲಿ ಸಾಗುವಾಗ Georg ಬರೆದ "Sonata for a Good Man" ಹೊಸ ಪುಸ್ತಕ ನೋಡುತ್ತಾನೆ, ಅದನ್ನು ಕೊಂಡು ಅದರ ಹಾಳೆ ತಿರುವುತ್ತ ಇರುವಾಗ ಅವನ ಕಣ್ಣಿಗೆ ಬೀಳುವುದು
"A Novel" "Dedicated to HGW XX-7, in gratitude."

ಹೀಗೆ ಚಿತ್ರ ಕೊನೆಗಾಣುತ್ತದೆ. ಒಟ್ಟಿನಲ್ಲಿ ಆಸ್ಕರ್ ಗೆದ್ದ ಮೊದಲ ಜರ್ಮನ್ ಚಿತ್ರ ಇದು, ತುಂಬಾ ಚೆನ್ನಾಗಿದೆ. ಮನ ಮಿಡಿಯುವ ಪಾತ್ರಗಳು,ಸನ್ನೀವೇಶಗಳು ಮನಮುಟ್ಟುತ್ತವೆ.

ನನ್ನ ರೇಟಿಂಗ್ :- ****

No comments: